A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರೇಕ್ಷಣೀಯ ಸ್ಥಳಗಳು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಪ್ರೇಕ್ಷಣೀಯ ಸ್ಥಳಗಳು
ಹೊಸದುರ್ಗ ತಾಲ್ಲೂಕು
ಬನಸಿಹಳ್ಳಿ ಏಕನಾಥೇಶ್ವರಿ
ದಶರಥ ರಾಮೇಶ್ವರ
ಹಾಲುರಾಮೇಶ್ವರ
ಹೆಗ್ಗೆರೆ: ಜೈನ ಯಾತ್ರಾ ಸ್ಥಳ
ಜಾನಕಲ್ಲು
ಕೂರ್ಮಾವತಾರ ಕ್ಷೇತ್ರ
ಸೂಜಿಗಲ್ಲು ಮೈಲಾರ ಕ್ಷೇತ್ರ
*******
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಹೊಳಲ್ಕೆರೆ ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ರಾಜ್ಯದ ಏಕೈಕ ಕೂರ್ಮಾವತಾರ ಕ್ಷೇತ್ರ

 ಬೆಂಗಳೂರಿನಿಂದ 175 ಕಿ.ಮೀ. ಚಿತ್ರದುರ್ಗದಿಂದ 85 ಕಿ.ಮೀ. ಹೊಸದುರ್ಗದಿಂದ 25 ಕಿ.ಮೀ., ಹಾಗೂ ಹಂಪೆಯಿಂದ 205 ಕಿ.ಮೀ., ದೂರದಲ್ಲಿರುವ ಶ್ರೀ ಗವಿರಂಗನಾಥಸ್ವಾಮಿ ಕ್ಷೇತ್ರವು ಪ್ರಾಚೀನ ಕಾಲದಲ್ಲಿ ವಾಮನನು ಪಾದ ಊರಿದ್ದ ಸ್ಥಳವೆಂಬ ಪ್ರತೀತಿಯೂ ಈ ಶ್ರೀಕ್ಷೇತ್ರಕ್ಕಿದೆ.

ಚಿತ್ರದುರ್ಗ ಜಿಲ್ಲೆಯ ಹಲವು ಜಾನಪದ ಹಿರಿಮೆಗಳಲ್ಲಿ ರಾಜ್ಯದ ಏಕೈಕ  ಕೂರ್ಮಾ (ಆಮೆ) ಅವತಾರದ ಕ್ಷೇತ್ರವಾದ ಶ್ರೀ ಗವಿರಂಗನಾಥಸ್ವಾಮಿ ಬೆಟ್ಟವೂ ಒಂದು! ಅನ್ನದಾನಿ ರಂಗ, ನಿತ್ಯೋತ್ಸವ ರಂಗ ಎಂದೆಲ್ಲ ಪ್ರಖ್ಯಾತವಾಗಿರುವ ಲ್ಲಿನ ಮುಖ್ಯ ದೈವವಾದ ಶ್ರೀ ಗವಿರಂಗನಾಥಸ್ವಾಮಿಗೆ ನಾಡಿನೆಲ್ಲಡೆಯಿಂದ  ಭಕ್ತರು ಬರುತ್ತಾರೆ. ದಕ್ಷಿಣ ಭಾರತದಲ್ಲಿರುವ ಮೂರು ಕೂರ್ಮಾತಾರ ಕ್ಷೇತ್ರದಲ್ಲಿ ಇದೂ ಒಂದು. ಇನ್ನೆರಡು ಕ್ಷೇತ್ರಗಳೆಂದರೆ, ತಮಿಳುನಾಡಿನ ತಿರುಕಚ್ಚೂರು (ಚಂಗಲ್ ಪೇಟ್ ಜಿಲ್ಲೆ ) ಮತ್ತು ಆಂದ್ರಪ್ರದೇಶದ ಗಂಜಾಂ ಜಿಲ್ಲೆಯಲ್ಲಿ ಇದೆ ಎಂದು ತಿಳಿದು ಬಂದಿದೆ.

         ಈ ಕ್ಷೇತ್ರವು ಹದಿನೈದನೆಯ ಶತಮಾನದ ಬೂದಿಹಾಳು ಕೋಟೆಯ ಪಾಳೆಯಗಾರ ಸಿರಮನಾಯಕನು ತನ್ನ ಕುಳದೈವವಾದ ಶ್ರೀ ರಂಗನಾಥನಿಗೆ ಇಲ್ಲಿ ದೇವಾಲಯವನ್ನು ಅಭಿವೃದ್ದಿಗೊಳಿಸಿರಬೇಕು. ಬೆಟ್ಟದಲ್ಲಿ ದೊಡ್ಡ ಆಮೆಯ ರೂಪದ ಕೂರ್ಮಾವತಾರ ಮೂರ್ತಿ ಒಡೆದು ಮೂಡಿದ ಶಿಲ್ಪಮೂರ್ತಿಯಾಗಿದ್ದು. ಶತಮಾನದಿಂದ ಶತಮಾನಕ್ಕೆ ಬೆಳೆಯುತ್ತಿದೆ ಎನ್ನಲಾಗಿದೆ.

        ಕ್ಷೇತ್ರದಲ್ಲಿ ಮೂಲದೇವರ  ದೇವಾಳಯವೇ ಅಲ್ಲದೇ ಅನಮತ ಪದ್ಮನಾಭಸ್ವಾಮಿ ದೇವಾಲಯ (ಶೇಷಯ ಮೂರ್ತಿ), ಶ್ರೀ ಲಕ್ಷ್ಮಿ ದೇವಸ್ಥಾನ, ಶ್ರೀ ಆಂಜನೇಯ ದೇವಾಲಯ, ಕೆಂಚಲಕ್ಕಮ್ಮನ ಗುಡಿ, ಮಂಡೆಯ ಮಂಟಪ, ಕೆಂಚರಾಯನ ಗುಡಿ ಮತ್ತು ಕಾಡರಾಯನ ಗುಡಿ, ಆಶ್ಚಾರರ ಗುಡಿ, ದೊಣೆಗಂಗಮ್ಮ, ಉಯ್ಯಾಲೆ ಕಂಬಗಳು, ಗಾಳಿ ಗೋಪುರ, ದೀಫಸ್ತಂಭಗಳೊಂದಿಗೆ ಪೂರ್ವಾಭಿಮುಖವಾಗಿ ಕ್ಷೇತ್ರ ಶೋಭಿಸುತ್ತಿದೆ.

        ಮತ್ತೊಂದು ಸ್ವಾರಸ್ಯದ ಸಂಗತಿಯೆಂದರೆ ಇದೇ ಕ್ಷೇತ್ರದ ಬೆಟ್ಟದ ಹಿಂಬದಿಯಲ್ಲಿ, ಅದೂ ಶ್ರೀ ಗವಿರಂಗನಾಥಸ್ವಾಮಿ ಮೂಲಮೂರ್ತಿಯಿರುವ ಗುಹೆಯ ನೇರಕ್ಕೆ (ಹಿಂಬದಿಗೆ) ಶೈವ ದೇವರುಗಳಾದ ಶಂಕರೇಶ್ವರ ಮತ್ತು ಮಲ್ಲೇಶ್ವರ ಲಿಂಗಗಳಿರುವ ಗುಹೆಯಿದೆ. ಅಷ್ಟೇ ಅಲ್ಲದೇ, ಈ ಲಿಂಗಗಳ ಗುಹೆಗೂ ಗವಿರಂಗನಾಥನ ಗುಹೆಗೂ ನಡುವೆ ಕಿರಿದಾದ ಸುರಂಗದೋಪಾದಿಯ ದ್ವಾರವಿದೆ. ಈ ಶೈವಗುಹೆ ಪಶ್ಚಿಮಾಭಿಮುಖವಾಗಿದೆ. ಬೆಟ್ಟದ ಎದುರಿಗೆ ತೋಪಿನ ಬಳಿ ಪುಷ್ಕರಣಿ ಇದ್ದು. ದಡದಲ್ಲಿ ಗೋಪುರವೊಂದನ್ನು ಕಟ್ಟಲಾಗಿದೆ. ಪುಷ್ಕರಿಣಿಯಲ್ಲಿ ನಾಲ್ಕು ಕಡೆ ಮೆಟ್ಟಿಲುಗಳನ್ನು ಹಾಕಿಸಿದ್ದು, ದೊಡ್ಡ  ಆಕಷ  ಕ ಕಲ್ಯಾಣಿಯಾಗಿ ಕಾಣುವುದು. ಜಾತ್ರೆಯ ಅವಧಿಯಲ್ಲಿ ಗವಿರಂಗನಾಥದೇವರ ಉತ್ಸವದ ಮೂರ್ತಿ ಇಲ್ಲಿ ಗಜೆಂದ್ರ ಮೋಕ್ಷ ಉತ್ಸವ ಸ್ವೀಕರಿಸುವುದು.


(ಆಧಾರ: ಹೊಸದುರ್ಗ ಸೀಮೆ ಜನಾಪದ ಬಾಗೂರು ನಾಗರಾಜಪ್ಪ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.