|
|
||||||||||||||||||
![]() |
ಇತಿಹಾಸ |
![]() |
||||||||||||||||
|
||||||||||||||||||
|
|
||||||||||||||||||
|
ಸಂಕ್ಷಿಪ್ತ ಇತಿಹಾಸ ಚಿತ್ರದುರ್ಗಕ್ಕೆ ಬಹು ಪುರಾತನ ಇತಿಹಾಸವಿದೆ. ಇಲ್ಲಿ ದೊರೆತಿರುವ ಪ್ರಾಚೀನ ಸ್ಮಾರಕಗಳು, ಅವಶೇಷಗಳು ಮತ್ತು ಶಿಲಾಶಾಸನಗಳ ಆಧಾರದಿಂದ ತಿಳಿದು ಬಂದಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ಇದರ ಅಸ್ತಿತ್ವ ಇತ್ತು. ಒಮ್ಮೆ ಇದು ಹಿಡಿಂಬಾಸುರನ ನೆಲೆಯಾಗಿದ್ದಿತೆಂದು ಹೇಳುವುದುಂಟು. ಇದಕ್ಕೆ ಬೆಟ್ಟದ ತಪ್ಪಲಿನಲ್ಲಿರುವ ಹಿಡಿಂಬರೇಶ್ವರ ದೇವಾಲಯವೇ ಸಾಕ್ಷಿ. ಇದೇ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗುಡ್ಡದ ಸಾಲಿನಲ್ಲಿ ಜಟಾಯುವಿನ ದೇವಸ್ಥಾನವೊಂದಿದೆ. ಚಿತ್ರದುರ್ಗದ ಬಳಿಯಿರುವ ಚಂದ್ರವಳ್ಳಿಯ ಅಂಕಲಿಮಠದ ಮುಂಭಾಗದಲ್ಲಿ ಪಾಂಡವರು ಸ್ಥಾಪಿಸಿದರು ಎನ್ನಲಾದ ಪಂಚಲಿಂಗಗಳನ್ನು ಈಗಲೂ ಕಾಣಬಹುದು.
ಕ್ರಿ.ಪೂ. 6ನೇ ಶತಮಾನದಿಂದ ಚಿತ್ರದುರ್ಗದ ಇತಿಹಾಸವನ್ನು ಗುರುತಿಸಲು ಸಾಧ್ಯವಾಗಿದ್ದು, ಔತ್ತರಾಯೇರ ಅನಂತರ ಮೌರ್ಯರೂ ಇಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿದರು. ಮೌರ್ಯದ ಸಾಮಂತರಾಗಿದ್ದ ಶಾತವಾಹನರು ಅನೇಕ ಚಕ್ರವರ್ತಿಯ ಮರಣಾನಂತರ ಈ ಭಾಗವನ್ನು ಸ್ವಾತಂತ್ರ್ಯರಾಗಿ ಆಳಿದರು. ಚಿತ್ರದುರ್ಗದ ಬೆಟ್ಟದ ತಪ್ಪಲಿನ ಚಂದ್ರವಳ್ಳಿ ಇವರ ರಾಜಧಾನಿಗಳಲ್ಲೊಂದಾಗಿತ್ತಂತೆ. ರೋಮ್ ನಂತಹ ದೇಶಗಳೊಂದಿಗೆ ಈ ಪಟ್ಟಣ ವಾಣಿಜ್ಯ ಸಂಪರ್ಕ ಇಟ್ಟುಕೊಂಡಿತ್ತು.
ಬನವಾಸಿ ಕದಂಬರ ದೊರೆಯಾದಂತಹ ಮಯೂರಶರ್ಮನು ಚಿತ್ರದುರ್ಗವನ್ನು ಆಳಿದ್ದು, ಚಂದ್ರವಳ್ಳಿಯ ಕೆರೆಯನ್ನು ನಿರ್ಮಿಸಿದನು ಎನ್ನುವುದಕ್ಕೆ ಇಲ್ಲಿಯ ಹುಟ್ಟುಬಂಡೆಯ ಮೇಲಿನ ಸಾಕ್ಷಿ. ಶಾತವಾಹನರ ನಂತರ ಬಂದ ಕದಂಬರು ಕ್ರಿ.ಶ. 6ನೇ ಶತಮಾನದವರೆಗೆ ಇಲ್ಲಿ ಆಳ್ವಿಕೆ ನಡೆಸಿದರು. ಅವರನ್ನು ಸೋಲಿಸಿ ಪ್ರಬಲರಾದವರು “ಬೆಮ್ಮತ್ತನಕಲ್ಲು” ಎಂಬ ಹೆಸರು ಪ್ರಚಲಿತವಾಯಿತು. ಪಲ್ಲವರು, ರಾಷ್ಟ್ರಕೂಟರು, ಚೋಳರು ಇಲ್ಲಿ ಆಳ್ಚಿಕೆ ನಡೆಸಿದ್ದಾರೆ.
ಕ್ರಿ.ಶ. 12 ಮತ್ತು 13ನೇ ಶತಮಾನಗಳಲ್ಲಿ ಹೊಯ್ಸಳರು ಪ್ರಬಲರಾದರು. ಕ್ರಿ.ಶ. 1173 ರಿಂದ 1220 ರವರೆಗೆ ಆಳಿದ ಇಮ್ಮಡಿ ಬಲ್ಲಾಳನ ಕಾಲದ ಶಾಸನಗಳು ಈ ಜಿಲ್ಲೆಯಲ್ಲಿ ದೊರೆಕಿವೆ. ಕ್ರಿ.ಶ. 1336ರಲ್ಲಿ ಅಸ್ತಿತ್ವಕ್ಕೆ ಬಂದ ವಿಜಯನಗರ ಸಾಮ್ರಾಜ್ಯದ ಜಿಲ್ಲಾ ಕೇಂದ್ರಾಳಿತವು ಚಿತ್ರದುರ್ಗವೇ (ಬೆಮ್ಮತ್ತನಕಲ್ಲು) ಆಗಿದ್ದಿತು. ಇಲ್ಲಿನ ಸಾಮಂತರಾಗಿದ್ದು ಮೊದಲನೇ ಬುಕ್ಕರಾಯನ ಮೊಮ್ಮಗ ಮಲ್ಲಿನಾಥ ಒಡೆಯ. ಇವನ ಕಾಲದಲ್ಲೇ ಕೋಟೆಯ ಕೆಲವು ಮುಖ್ಯದ್ವಾರ ಹಾಗೂ ಕೆಲವು ಸುತ್ತು ಕೋಟೆಗಳು ನಿರ್ಮಾಣಗೊಂಡವು. ಈ ಸಾಮಂತರ ನಂತರ ಇಲ್ಲಿಯ ಒಡೆತನ ಪಡೆದವರು ಪಾಳೆಯಗಾರರು. ಮತ್ತಿತಿಮ್ಮಣ್ಣನಾಯಕನಿಂದ ರಾಜವೀರ ಮದಕರಿನಾಯಕನವರೆಗೆ ಸುಮಾರು 14 ಮಂದಿ ಪಾಳೆಯಗಾರರು ಕ್ರಿ.ಶ. 1568 ರಿಂದ 1779ರವರೆಗೆ, ಸುಮಾರು 211 ವರ್ಷಗಳ ಕಾಲ ಈ ಸಂಸ್ಥಾನವನ್ನು ಆಳಿದ್ದಾರೆ. (ಆಧಾರ:"ಹುಲ್ಲೂರು ಶ್ರೀನಿವಾಸ ಜೋಯಿಸರ ಸಂಶೋಧನ ಲೇಖನಗಳು" – ಲಕ್ಷ್ಮಣ ತೆಲಗಾವಿ, ಎಂ.ವಿ.ಶ್ರೀನಿವಾಸ) |
|||||||||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
||||||||||||||||||