|
|
|||||||||||
![]() |
ಇತಿಹಾಸ |
![]() |
|||||||||
|
|||||||||||
|
ವಿಜಯನಗರ ಸಾಮ್ರಾಜ್ಯ
ಬಳ್ಳಾರಿ ಜಿಲ್ಲೆಯ ಹಂಪಿಯನ್ನು ರಾಜಧಾನಿಯನ್ನಾಗಿಸಿ ಕ್ರಿ.ಶ. 1336-1556 ರವರೆಗೂ ವಿಜಯನಗರ ಸಾಮ್ರಾಜ್ಯ ಮೆರೆತಯಿತು. ಇಡಿ ಕರ್ನಾಟಕ, ಆಂಧ್ರ, ತಮಿಳುನಾಡುಗಳನಲ್ಲದೆ ಮಹಾರಾಷ್ಟ್ರ ಪಶ್ಚಿಮ ಭಾಗವನ್ನು ಸಹ ಅದು ಒಳಗಗೊಂಡಿತ್ತು. ವಿಜಯನಗರದ ಸ್ಥಾಪಕರು ಕನ್ನಿಡಿಗರೇ ಎಂಬುದರಲ್ಲಿ ಯಾವುದೆ ಅನುಮಾನವಿಲ್ಲ. ತೆಲುಗು ಕವಿ ಶ್ರೀನಾಥನು ಎರಡನೇ ದೇವರಾಯನನ್ನು ‘ಕರ್ನಾಟಕ ಕ್ಷಿತಿನಾಥ’ ನೆಂದು ಕರೆದಿದ್ದಾನೆ. ಕೃಷ್ಣದೇವರಾಯನೇ ತನ್ನನ್ನು ಸ್ವತಃ ‘ಕನ್ನಡ ರಾಯ’ ಎಂದೇ ತನ್ನ ತೆಲಗು ಕಾವ್ಯ ಅಮುಕ್ತಮೌಲ್ಯ’ದಲ್ಲಿ ಕರೆದುಕೊಂಡಿದ್ದಾನೆ.
ಯಾವುದೇ ಅಧಿಕಾರದಾಹ, ದ್ವೇಷ, ಸ್ವಾರ್ಥ, ಮಹಾತ್ವಕಾಂಕ್ಷೆಗಳ ಉದ್ದೇಶವಿಲ್ಲದೆ ಒಂದು ಮಹಾ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಜನ್ಮ ತಳೆದವಿಶ್ವದ ಏಕೈಕ ಸಾಮ್ರಾಜ್ಯವೆಂದರೆ ವಿಜಯನಗರ ವಿಜಯನಗರ ಸಾಮ್ರಾಜ್ಯ. ಹದಿಮೂರನೇ ಶತಮಾನದ ಅಂತ್ಯದಲ್ಲಿ ದಕ್ಷಿಣ ಭಾರತಕ್ಕೆ ಧಾಳಿ ಇಟ್ಟ ಇಸ್ಲಾಂನಿಂದ ತತ್ತರಿಸಿದ ಭಾರತೀಯ ಸಂಸ್ಕೃತಿಯ ರಕ್ಷಣೆಗೆ ಕ್ರಿ.ಶ.1336 ರಲ್ಲಿ ವಿಧ್ಯಾರಾಣ್ಯ ಮತ್ತು ಕಾಶಿ ವಿಲಾಸ ಕ್ರಿಯಾಶಕ್ತಿಯವರ ಆರ್ಶೀವಾದ ಪಡೆದು ಹಕ್ಕಬುಕ್ಕರು ಸಾಮ್ರಾಜ್ಯವನ್ನು ಸ್ಥಾಪಿಸಿದರು. ಬುಕ್ಕನ ಕಾಲದಲ್ಲಿ (ಕ್ರಿ.ಶ.1370) ಸಾಯಣ ಮತ್ತು ಮಾಧವರಿಂದ ವೇದಗಳಿಗೆ ಭಾಷ್ಯವು ರಚನೆಯಾಯಿತು. ಚೀನಾಕ್ಕೆ ಬುಕ್ಕನ ರಾಯಭಾರಿಗಳು ಹೋಗಿದ್ದರು. ಇಮ್ಮಡಿ ಹರಿಹರ (ಕ್ರಿ.ಶ.1374) ತಮಿಳುನಾಡಿನ ಮಧುರೈ ಸುಲ್ತಾನನ್ನು ಸೊಲಿಸಿದನು. ಮೊದಲ ದೇವರಾಯ ಕಾಲದಲ್ಲಿ (ಕ್ರಿ,ಶ.1410) ತುಂಗಭದ್ರೆಯಿಂದ ರಾಜಧನಿಗೆ ನೀರು ಸರಬರಾಜು ವ್ಯವಸ್ಥೆಯಾಯಿತು. ಇಮ್ಮಡಿ ದೇವರಾಯನ ಕಾಲದಲ್ಲಿ (ಕ್ರಿಶ.1430) ವಿರಶೈವ ಸಾಹಿತ್ಯ ವಿಶೇಷವಾಗಿ ಬೆಳೆಯಿತು. ಅವನು ಮುಸಲ್ಮಾನರಿಗೆ ರಾಜಧಾನಿಯಲ್ಲಿ ಮಸಿಧಿಯನ್ನು ಕಟ್ಟಸಿದನು.
ಕೃಷ್ಣದೇವರಾಯನ ಕಾಲದಲ್ಲಿ (ಕ್ರಿ..ಶ 1520) ವಿಜಯನಗರ ಸಾಮ್ರಾಜ್ಯವು ವೈಭವದ ತುತ್ತ ತುದಿಯನ್ನು ಕಂಡಿತ್ತು. ಅವನು ಸಾಹಿತ್ಯ, ಕಲೆಗಳ ಆರಾಧಾಕನಾಗಿದ್ದ. ಕ್ರಿಶ. 1565 ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯವು ಪತನಗೊಂಡಿತು |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||