A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಇತಿಹಾಸ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಸಂಕ್ಷಿಪ್ತ ಇತಿಹಾಸ
ಪ್ರಾಗಿತಿಹಾಸ
ಮೌರ್ಯರು
ಶಾತವಾಹನರು
ಕದಂಬರು
ಗಂಗರು
ಚಾಲುಕ್ಯರು
ಹೊಯ್ಸಳರು
ವಿಜಯನಗರ
ಚಿತ್ರದುರ್ಗ ಪಾಳೆಯಗಾರರು
ಬೂದಿಹಾಳು ಪಾಳೆಯಗಾರರು
ಹರತಿ ಪಾಳೆಯಗಾರರು
ಹಟ್ಟಿ ಪಾಳೆಯಗಾರರು
ಮತ್ತೋಡು ಪಾಳೆಯಗಾರರು
ಮೈಸೂರು ಸಂಸ್ಥಾನ

 

ಹಟ್ಟಿ ಪಾಳೆಯಗಾರರು

 

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಹೀಗೊಂದು ಕಾಲಕ್ಕೆ ಕೇವಲ ಹಟ್ಟಿ ಎಂಬ ಹೆಸರನ್ನು ಹೊಂದಿದ್ದ ಪಾಳೆಯಪಟ್ಟಾಗಿತ್ತು. ಈ ಹಟ್ಟಿಯನ್ನಾಳಿದ ಪಾಳೆಯಗಾರರೇ ಹಟ್ಟಿ ಪಾಳೆಯಗಾರರು ಎಂದು ಹೆಸರಾಗಿದ್ದಾರೆ. ಈ ಪಾಳೆಯಗಾರರಲ್ಲಿ ಒಬ್ಬನಾದ ಕಾಕಳನಾಯಕನೇ ಹಟ್ಟಿಯ ಮೂಲ ನಿರ್ಮಾಪಕ ಎನ್ನಲಾಗಿದೆ. ಇವನ ಮಗನೇ ದೊಡ್ಡಿಲ ಮಲ್ಲಪ್ಪನಾಯಕ. ಅವರ ಎರಡನೇ ಮಗನೇ ಬೋಡಿ ಮಲ್ಲಪ್ಪನಾಯಕ. ಚಿತ್ರದುರ್ಗದ ಚಿಕ್ಕಣ್ಣನಾಯಕನ ತಂಗಿ ಸರ್ಜಮ್ಮನಾಗತಿ ಕಾಕಳನಾಯಕನ ಹೆಂಡತಿ. ಒಮ್ಮೆ ಈ ನಾಯಕನು ಕಾಶೀಯಾತ್ರೆ ಮಾಡುತ್ತಾ, ಆನೆಗೊಂದಿ ಪಟ್ಟಣಕ್ಕೆ ಬಂದನು. ಅಲ್ಲಿ ಭೀಮಾ ಜಟ್ಟಿ ಎಂಬುವವನೊಬ್ಬನು ತನ್ನನ್ನು ಸೋಲಿಸುವರೇ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದನು. ಅಂತಹ ಜಟ್ಟಿಯನ್ನು ಕಾಕಳನಾಯಕನು ದ್ವಂದ್ವಯುದ್ಧದಲ್ಲಿ ಮಣ್ಣು ಮುಕ್ಕಿಸಿದನು. ಆನೆಗೊಂದಿಯ ರಾಯರು ಇವನ ಸಾಹಸ, ಪರಾಕ್ರಮಗಳನ್ನು ಮೆಚ್ಚಿ, ಇವನಿಗೆ ಮೂರು ಗ್ರಾಮಗಳನ್ನು ಕೊಟ್ಟು, ಹಾಗೆಯೇ ಭೀಮ ಎಂಬ ಬಿರುದು ನೀಡಿ ಸನ್ಮಾನಿಸಿದರು.

 

ಮುಂದೆ ಬೋಡಿ ಮಲ್ಲಪ್ಪನಾಯಕನು ಕಾಶಿಯಿಂದ ಬೋಡಿಲಿಂಗವನ್ನು ರಾಮೇಶ್ವರದಿಂದ ಮತ್ತೊಂದು ಲಿಂಗವನ್ನು ತೆಗೆದುಕೊಂಡು ಬಂದು ರಾಮದುರ್ಗದಲ್ಲಿ ಪ್ರತಿಷ್ಟಾಪಿಸಿದನು. ನಾಯಕನಹಟ್ಟಿಯ ದಕ್ಷಿಣಕ್ಕಿರುವ ಈ ಗುಡ್ಡ ಕೋಟೆ ಕಟ್ಟಲು ಪ್ರಶಸ್ತ ಸ್ಥಳ ಎನಿಸಿದ್ದರಿಂದ ಅದನ್ನುರಾಮದುರ್ಗ ಎಂದು ಕರೆದನು. ಇದಲ್ಲದೇ ಈ ನಾಯಕನು ಏಳು ಕೆರೆ ಮತ್ತು ಒಂಭತ್ತು ಗ್ರಾಮಗಳನ್ನು ಕಟ್ಟಿಸಿದನು. ಆನೆಗೊಂದಿ ರಾಯರು ಕೊಟ್ಟ ಭೀಮ ಎಂಬ ಬಿರುದು ಸದಾಕಾಲ ಉಳಿಯುವಂತೆ ಅವನು ಕಟ್ಟಿಸಿದ ಕೆರೆಯಲ್ಲಿ ಒಂದಕ್ಕೆ ಭೀಮನಕೆರೆ ಎಂದು ಹೆಸರಿಟ್ಟನು.


(ಆಧಾರ: ಹರಿತಿ ಸಿರಿ ಲಕ್ಷ್ಮಣ್ ತೆಲಗಾವಿ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.